ಕೀರ್ತನೆ - 249     
 
ಏನಮಾಡಿದರೆನ್ನ ಭವಹಿಂಗದು । ದಾನವಾಂತಕ ನಿನ್ನ ದಯವಾಗದನಕ ಅರುಣೋದಯಲೆದ್ದು ಅತಿಸ್ನಾನಗಳ ಮಾಡಿ | ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ || ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ । ಹರಿ ನಿನ್ನ ಕರುಣಾ ಕಟಾಕ್ಷವಿರದನಕ ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ | ಅತಿ ಶೀಲಗಳನೆಲ್ಲ ಮಾಡಿ ದಣಿದೆ || ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು | ರತಿಪತಿಯ ಪಿತ ನಿನ್ನ ದಯವಾಗದನಕ ದಾನವನು ಮಾಡಿದೆನು ಮೌನವನು ತಾಳಿದೆನು । ಜ್ಞಾನ ಪುರುಷಾರ್ಥಕ್ಕೆ ಮನವೀಯದೆ || ಶ್ರೀನಾಥ ದಯಪೂರ್ಣ ಪುರಂದರವಿಠಲನ | ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ