ಕೀರ್ತನೆ - 247     
 
ಏಕೆ ಮೈ ಮರೆದೆ ನೀನು ಜೀವನವೇ । ಏಕೆ ಮೈಮರೆದೆ ನೀನು. ಏಕೆ ಮೈಮರೆದೆ ನೀ ಲೋಕಾರಾಧ್ಯನ ಪಾದ। ಬೇಕೆಂದು ಭಜಿಸು ಕಾಣೋ ಜೀವನವೇ ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ । ಎದ್ದು ಕುಳ್ಳಿರಬಾರದೆ ಜೀವನವೇ ।। ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ | ಒದ್ದು ಬಿಸಾಡು ಕಣೋ – ಜೀವನವೇ ಕಂದರ್ಪನೆಂಬವ ಕಾದುತ ಬರುವಾಗ | ನಿಂದಿಸುತ್ತಿರಬಾರದೆ ಜೀವನವೇ ॥ ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು । ಕೊಂದು ಬೀಸಾಡು ಕಾಣೋ ಜೀವನವೇ ವಿಷಯದಿ ಸುಖಕಾಣೆ ಪಶುಜನರೊಳು ದೇಹ । ಹಸನುಗಳೆಯಲು ಬೇಡವೋ ಜೀವನವೇ।। ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -| ರಸದಿ ಲೋಲಾಡು ಕಾಣೋ ಜೀವನವೇ