ಕೀರ್ತನೆ - 161     
 
ಆರಿಗೆ ವಧುವಾದೆ - ಅಂಬುಜಾಕ್ಷಿ | ಕ್ಷೀರಾಬ್ಧ ಕನ್ನಿಕೆ - ಶ್ರೀ ಮಹಾಲಕುಮೀ ಶರಧಿ ಬಂಧನ ರಾಮಚಂದ್ರ ಮೂರುತಿಗೊ | ಪರಮಾತ್ಮ ಸಿರಿಯನಂತಪದ್ಮನಾಭನಿಗೋ । ಸರಸಿಜಭವ ಜನಾರ್ದನಮೂರುತಿಗೋ | ಎರಡು ಹೊಳೆಯ ರಂಗಪಟ್ಟಣವಾಸಗೊ ಚೆಲುವ ಬೇಲೂರು ಚೆನ್ನಿಗರಾಯನಿಗೊ । ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೊ | ಇಳೆಯೊಳು ಪಂಢರಪುರ ವಿಠಲೇಶಗೊ || ನಳಿನಾಕ್ಷಿ ಹೇಳು ಬದರೀನಾರಾಯಣನಿಗೊ ಮಲಯಜಗಂಧಿ, ಬಿಂದುಮಾಧವರಾಯಗೊ | ಸುಲಭದೇವ ಪುರುಷೋತ್ತಮಗೊ ॥ ಫಲದಾಯಕ ನಿತ್ಯ ಮಂಗಳನಾಯಕಗೊ । ಚೆಲುವೆ ನಾಚದೆ ಪೇಳು ಶ್ರೀ ವೆಂಕಟೇಶಗೋ ವಾಸವಾರ್ಚಿತ ಕಂಚೀವರದರಾಜಮೂರುತಿಗೊ | ಆ ಸುರವಂದ್ಯ ಶ್ರೀಮುಷ್ಣದಾದಿವರಹನಿಗೊ ॥ ಶೇಷಶಾಯಿಯಾದ ಶ್ರೀ ರಂಗನಾಯಕಗೊ | ಸಾಸಿರನಾಮದೊಡೆಯ ಅಳಗಿರಿಯೀಶಗೋ ಶರಣಾಗತರನು ಪೊರೆವ ಶಾರ್ಙ್ಗಪಾಣಿಗೊ | ವರಗಳನೀವ ಶ್ರೀನಿವಾಸ ಮೂರುತಿಗೋ । ಕುರುಕುಲಾಂತಕ ರಾಜಗೋಪಾಲ ಮೂರುತಿಗೊ | ಸ್ಥಿರವಾದ ಪುರಂದರವಿಠಲರಾಯನಿಗೊ