ಕೀರ್ತನೆ - 160     
 
ಸತ್ಯಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಜೀವ ಈಶಗೆ ಭೇದ ಸರ್ವತ್ರ ಜೀವಜೀವಕೆ ಭೇದವು ಜೀವ ಜಡರೊಳು ಭೇದ ಜಡರೊಳು ಭೇದ ಜಡಪರಮಾತ್ಮಗೆ ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವಗಂಧರ್ವರು ಜಾನಪಿತರಜಾನಜ ಕರ್ಮಜರ್ದಾನವಾರಿ ತಶ್ವೇಶರು ಗಣಪಮಿತ್ರರು ಸಪ್ತ ಖಷಿಗಳು ವಹ್ನಿ ನಾರದವರುಣರು ಇನಜಗೆ ಸಮಚಂದ್ರ ಸೂರ್ಯರು ಮನುಸುತೆಯು ಹೆಚ್ಚುಪ್ರವಹನು ದಕ್ಷಸಮ ಅನಿರುದ್ಧ ಗುರುಶಚಿ ರತಿ ಸ್ವಾಯಂಭುವರಾರ್ವರು ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು ಕೇವಲವು ಈ ಶೇಷ ರುದ್ರರು ದೇವಿ ಹೆಚ್ಚು ಸರಸ್ವತೀ ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು ವಾಯು ಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀರಮಾ ಅನಂತ ಗುಣದಿಂ ಲಕುಮಿಗಧಿಕನು ಶ್ರೀಪುರಂದರವಿಠಲನು ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ಪದ್ಮವಾಸಗೆ