ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಥುರಿಲಿ ಮಡುಹಿದ ಯ
ಶೋದೆಯ ನಂದನ ನೀ ಬಾರೋ
ಕಣಕಾಲಂದುಗೆ ಗಣಗಣಕೆನುತಲಿ
ತನನನ ವೇಣು ನಾದದಲಿ ||
ಚಿಣಿಕೋಲು ಚಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ
ಶಂಖ ಚಕ್ರವು ತೋಳಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ ಅಕ- 1
ಳಂಕ ಮಹಿಮನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿಬಾರೋ
ಖಗವಾಹನನೆ ಬಗೆ ಬಗೆ ರೂಪನೆ |
ನಗೆ ಮೊಗದರಸನೆ ನೀ ಬಾರೋ ॥
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |
ಪುರಂದರ ವಿಠಲ ನೀ ಬಾರೋ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ