ಕೀರ್ತನೆ - 138     
 
ಯದುನಂದನನ ನೋಡುವ – ಬಾರೆ ಲತಾಂಗಿ । ಹದಿನಾಲ್ಕು ಜಗವನ್ನು ಪೊರೆವ – ನೀಲಘನಾಂಗನ ಬಿಗಿದುಟ್ಟ ಕನಕಾಂಬರ -ಕಾಂಚಿಯ ದಾಮ । ನಗೆಯರಳ ಧರಿಸಿದವನ । ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣನ ಸಣ್ಣ ಪೊಂಗಳಲೂದುತ – ವನಜದಳಾಕ್ಷ | ಕಣ್ಣ ಸನ್ನೆಯ ಮಾಡುತ ॥ ಚಿಣ್ಣರ ಒಡಗೂಡಿ ಚಿಗಿದು ಬಾಹ ಕೃಷ್ಣನ ಮಂದಹಾಸ ಮುಖಾಂಬುಜ - ಪೊಂದಿದಂಥ | ಗಂಧ-ಕಸ್ತೂರಿ ತಿಲಕಾ | ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ