ಕೀರ್ತನೆ - 137     
 
ಮುಯ್ಯಕ್ಕೆ ಮುಯ್ಯ ತೀರಿತು ಜಗ । ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ ಸಣ್ಣವನೆಂದು ನಾ ನೀರು ತಾಯೆಂದರೆ | ಬೆಣ್ಣೆಗಳ್ಳ ಕೃಷ್ಣ ಮರೆಯಮಾಡಿ ॥ ಚಿನ್ನದ ಪಾತ್ರೆಯ ನೀರ ತಂದಿತ್ತರೆ | ಕಣ್ಣ ಕಾಣದೆ ನಾನು ಟೊಣೆದೆ ಪಂಢರಿರಾಯ ಎನ್ನ ಪೆಸರ ಪೇಳಿ ಸೂಳೆಗೆ ಕಂಕಣ | ವನ್ನು ನೀನು ಕೊಟ್ಟು ನಿಜವಮಾಡೆ || ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ । ನಿನ್ನ ಮುಯ್ಯಕೆ ಮುಯ್ಯ ತೋರಿದೆ ಪಂಢರಿರಾಯ ಭಕ್ತವತ್ಸಲನೆಂಬ ಬಿರುದು ಬೇಕಾದರೆ । ಕಿತ್ತು ಈಡಾಡೊ ಇನ್ನೊಂದು ಕಂಕಣವ || ಮುಕ್ತಿಗೆ ನೀನಲ್ಲದಾರನು ಕಾಣೆನು | ಮುಕ್ತೀಶ ಪುರಂದರವಿಠಲ ಪಂಢರಿರಾಯ