ಪೋಗದಿರಲೊ ರಂಗ-ಬಾಗಿಲಿಂದಾಚೆಗೆ 1
ಭಾಗವತರು ಕಂಡರೆತ್ತಿಕೊಂಡೊಯ್ವರೊ
ಸುರಮುನಿಗಳು ತಮ್ಮ ಹೃದಯಗಹ್ವರದಲಿ |
ಪರಮಾತ್ಮ ನಿನ್ನ ಕಾಣದರಸುವರೊ ।
ದೊರಕದ ವಸ್ತುವು ದೊರೆಕಿತು ತಮಗೆಂದು ।
ಹರುಷದಿಂದ ನಿನ್ನ ಕರೆದೆತ್ತಿಕೊಂಬರೊ
ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ |
ಹಗರಣ ಮಾಳ್ವರೊ ಗೋಪಾಲನೆ |
ಮಗುಗಳ ಮಾಣಿಕ್ಯ ತಗುಲಿತು ಕರೆತಂದು |
ಮಿಗಿಲು ವೇಗದಿ ಬಂದು ಬಿಗಿದಪ್ಪಿಕೊಂಬರೊ
ದಿಟ್ಟ ನಾರಿಯರು ತಮ್ಮಿಷ್ಟವ ಸಲಿಸೆಂದು ।
ಅಟ್ಟಟ್ಟಿ ಬೆಂಬತ್ತಿ ತಿರುಗುವರೊ ||
ಸೃಷ್ಟೀಶ ಪುರಂದರವಿಠಲ ರಾಯನೆ |
ಇಷ್ಟಿಷ್ಟು ಬೆಣ್ಣೆಯ ಕೊಡುವೆನೊ ರಂಗಯ್ಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ