ಕೀರ್ತನೆ - 69     
 
ಎನಗೂ ಆಣೆ- ನಿನಗೂ ಆಣೆ । ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ನಿನ್ನನು ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ-ರಂಗ | ಎನ್ನನು ನೀ ಕೈಬಿಟ್ಟು ಪೋದರೆ ನಿನಗೆ ಆಣೆ ತನು-ಮನ-ಧನದಲಿ ವಂಚಕನಾದರೆ ಎನಗೆ ಆಣೆ-ರಂಗ-| ಮನಸು ನಿನ್ನೊಳು ನಿಲಿಸದಿದ್ದರೆ ನಿನಗೆಆಣೆ ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ-ರಂಗ-| ಲೌಕಿಕವನ್ನು ಬಿಡಿಸದಿದ್ದರೆ ನಿನಗೆ ಆಣೆ ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ-ರಂಗ-| ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ-ರಂಗ-| ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ