ಕೀರ್ತನೆ - 68     
 
ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ ಗೋಪಿ | ಇಂಥ ಮಗನ ಕಾಣೆವೆ ಚಿಂತಿಸಿದರೂ ದೊರಕ ಚೆಲುವ ರಾಜಗೋಪಾಲ | ಇಂತೀ ಮಾತುಗಳೆಲ್ಲವು - ಹುಸಿಯಲ್ಲವು ಸರಸಿಜನಾಭನ ಸುಮ್ಮನೆ ಕೊಂಡಾಡೆ | ದುರಿತವೆಲ್ಲವು ಪೋಪುದೆ ।। ಸರಸದಿಂದಲಿ ಒಮ್ಮೆ ಸವಿಮಾತನಾಡಿದರೆ | ಪರಿತೋಷ ಕೈಗೂಡುವುದೆ-ಯಶೋದೆ ಊರ ಒಳಗೆ ನಿಮ್ಮ ಅಂಜಿಕೆ ನೆರೆಹೊರೆ | ದೂರಿಕೊಂಬುವರಲ್ಲವೆ? ॥ ಅರಣ್ಯದಲಿ ನಾವು ಆಡಿದ ಆಟವು । ಆರಿಗಾದರೂ ಉಂಟೇನೆ-ಇಂದುವದನೇ? ನಿನ್ನ ಮಗನ ಕರೆಯೆ ಎನ್ನ ಪ್ರಾಣದೊಡೆಯ । ಪುಣ್ಯದ ಫಲವು ಕಾಣೆ ॥ ಚೆನ್ನ ಶ್ರೀ ಪುರಂದರ ವಿಠಲರಾಯನ | ನಿನ್ನಾಣೆ ಬಿಡಲಾರೆವೆ-ಪುಸಿಯಲ್ಲವೆ