ಎಂಥ ಗಾಡಿಕಾರನೆ-ಕೃಷ್ಣಯ್ಯ ಇ - |
ನ್ನೆಂಥ ಗಾಡಿಕಾರನೆ?
ಕಂತುಪಿತನು ವೇಲಾಪುರದ ಚೆನ್ನಿಗರಾಯ
ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ ಲಂಡನೇನೆ-ಅಮ್ಮ |
ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೆ?
ಹೆಚ್ಚು ಹೇಳುವುದೇನು ಬಿಚ್ಚಿ ಉರೋಜವ ತೋರುವನೆ-ಅಮ್ಮ |
ಮುಚ್ಚು ಮರೆಯೇತಕೆ ಮನೆಮನೆಗಳಲ್ಲಿ ಪೋಗುವನೆ
ವಸುಧೆಯೊಳಗೆ ನಂದಗೋಕುಲದೊಳಗೆ ತಾ ಬಂದ ಕಾಣೆ-ಅಮ್ಮ |
ಹಸು ಮಗನಾದನೀ ಪುರಂದರವಿಠಲರಾಯ ಕಾಣೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ