ಇಂತು ವೇದಾಂತಗಳಲ್ಲಿ ಸುರರು ನಿನ್ನ
ಎಣಿಸುವರಹುದಹುದೈ-ನಿ-
ನ್ನಂತವ ತಿಳಿಯಲು ಬ್ರಹ್ಮಾದಿಗಳಿಗೆ
ಅಳವಲ್ಲಹುದಹುದೈ |
ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ |
ಪಂಡಿತರಾದಾ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ ।।
ಮಂಡೆನೇವರಿಸಿ ಮೊಲೆಯನಿತ್ತವಳಿಗೆ ಮರಣವು ನಿನ್ನಿಂದೈ |
ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ
ತೊತ್ತಿನ ಮಗನಿಗೆ ಒಲಿದು ನಿನ್ನಯ ಗುಣ ತೋರಿದೆ ಅಹುದಹುದೈ |
ಉತ್ತಮರನು ನೀನಡವಿ ಸೇರಿಸಿದೆ ಉತ್ತಮನಹುದಹುದೈ ।।
ಅತ್ತೆಯನುಳುಹಿದೆ ಮಾವನ ಮಡುಹಿದೆ ಏತರ ನ್ಯಾಯವಿದ್ಯೆ |
ಮತ್ತನಾಗಿ ನಿನ್ನ ಬೈದ ಪಾತಕಿಯ ಮೈಯೊಳಗಿರಿಸಿದೆಯ್ಯ
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ ।
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದ್ಯೆ |
ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ |
ಮಂದರಧರ ಶ್ರೀ ಪುರಂದರವಿಠಲ ಮಾಡಿದ್ದೇ ಮರಿಯಾದ್ರೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಪುರಾಣ ಮೂಲದ ಹರಿ ಸ್ತುತಿ