ಗೋವರ್ಧನಗಿರಿಯ ನೆಗಹಿಬಂದು – ನೀನಿಲ್ಲಿ
ಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ?
ಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |
ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ?
ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು |
ಅಸುಗುಂದಿ ಮಲಗಿದೆಯೊ- ಶ್ರೀರಂಗ
ಕಡಹದ ಮರದಿಂದ ಧುಮುಕಿ ಕಾಳಿಂಗನ |
ಹೆಡೆಯ ತುಳಿದು ಕಾಲೊಂದು ಮಲಗಿದೆಯೊ?
ಬಾಲ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ |
ನೆಲನನಳೆದು ಕಾಲುನೊಂದು ಮಲಗಿದೆಯೊ?
ಶ್ರೀಶ ಶ್ರೀರಂಗರಾಜ ಪರಮಪಾವನ |
ಶೇಷಶಯನ ಶ್ರೀಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಪುರಾಣ ಮೂಲದ ಹರಿ ಸ್ತುತಿ