ಕೀರ್ತನೆ - 4     
 
ಶರಣು ಶರಣು ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ ನಿಟಿಲ ನೇತ್ರನ ವರದ ಸುತನೆ ನಾಗ ಯಜ್ಞೋಪವೀತನೆ ಕಟಿಯ ಸೂತ್ರದ ಕೋಮಲಾಂಗನೆ ಕರ್ಣಕುಂಡಲಧಾರನೆ ಬಟ್ಟಮುತ್ತಿನ ಪದಕ ಹಾರನೆ ದಿವ್ಯಬಾಹು ಚತುಷ್ಕನೆ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ–ಅಂಕುಶಧಾರನೆ ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ ಗೆಲಿದನೆ ಪಕ್ಷಿ ವಾಹನನಾದ ಪುರಂದರ ವಿಠಲನ ನಿಜದಾಸನೆ