ಕೀರ್ತನೆ - 3     
 
ಶರಣು ಶರಣು ಶರಣು ಬೆನಕನೆ ಕನಕ ರೂಪನೆ ಕಾಮಿನಿ ಸಂಗ ದೂರನೆ । ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೆ ಏಕವಿಂಶತಿ ಪತ್ರ ಪೂಜಿತಾನೇಕ ವಿಘ್ನ ವಿನಾಯಕನೆ ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯ ಶಿವಗುಣ ಸಾಗರನೆ ಕಂಬುಕಂಧರ ಇಂದು ಮೌಳಿಜ ಚಂದನ ಚರ್ಚಿತಾಂಗನೆ || ಚತುರ್ಬಾಹು ಚರಣತೊರವಿನ ಚತುರ ಆಯುಧ ಧಾರನೆ ಮತಿಯವಂತನೆ ಮಲಿನಜನಿತನೆ ಅತಿಯ ಮಧುರಾಹಾರನೆ || ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೆ ಚಕ್ರಧರ ಹರಬ್ರಹ್ಮ ಪೂಜಿತ ರಕ್ತವಸ್ತ್ರಾಧಾರನೆ ॥ ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕನೆ ದಾಸ ಪುರಂದರ ವಿಟ್ಠಲೇಶನ ಈಶಗುಣಗಳ ಪೊಗಳುವೆ ""