ಕೀರ್ತನೆ - 1125     
 
ಮಂದರಗಿರಿಯನೆತ್ತಿದ ತೋಳನ್ನಾಡೈ ತೋಳು ತೋಳು ಕೃಷ್ಣ | ಕೃಷ್ಣ ಸಿಂಧುವಿನಂಬಿನ ಮನೆಗೆ ತಂದ ತೋಳು ಕೃಷ್ಣ । ಬಂದಿಬಾಹು ಬಳೆಯನಿಟ್ಟ ತೋಳು ತೋಳು ತೋಳು ಕೃಷ್ಣ | ಚಂದನ ಕುಂಕುಮ ಗಂಧವನಿಟ್ಟ ತೋಳು ಕೃಷ್ಣ | ಇಂದಿರೆ ದೇವಿಯನಪ್ಪುವ ತೋಳು ತೋಳು ಕೃಷ್ಣ ಇತ್ತೆಂದು ಮಗನ್ನ ತೋಳನಾಡಿಸೆ । ಪುರಂದರವಿಠಲ ನೀ ತೋಳನ್ನಾಡೈ