ಕೀರ್ತನೆ - 967     
 
ಅಚ್ಯುತ ಸುಳಿದ ಎನ್ನ ಕಣ್ಣ ಮುಂದೆ ಅವ್ವ | ಅನಂತ ಸುಳಿದ ಎನ್ನ ಕಣ್ಣ ಮುಂದೆ ಅವ್ವ | ಕಸ್ತೂರಿಮೃಗದಂತೆ ಘಮ ಘಮಿಸುತ । ನಗುತ ನೋಡುತ ನುಡಿಯುತ ನುಡಿಸುತ | ಏನೆಂಬೆನವ್ವ ಸೆರೆಗೊಂಡ ಸೂರೆಗೊಂಡ | ಉಮ್ಮತ್ತೂರ ಚನ್ನಯ ಪುರಂದರವಿಠಲ