ಕೀರ್ತನೆ - 911     
 
ಚೆಂದಿರನಿಗೆ ಇಂದು ನಿಂದಿರೆ ತೆರಪಿಲ್ಲ | ಸೂರ್ಯನಿಗೆ ಇಂದು ಕುಳ್ಳಿರೆ ಹೊತ್ತಿಲ್ಲ | ಇಂದ್ರಾದಿಗಳೆಲ್ಲ ಹರಿ ಹರಿ ಎಂದು ತಲೆಯನ್ನು ತುರಿಸ ಹೊತ್ತಿಲ್ಲ | ಬೊಮ್ಮಾದಿಗಳಿಗೂ ಒಮ್ಮೆಯೂ ತೆರಹಿಲ್ಲ । ಈ ದೇವರನೆಲ್ಲ ಮೆಟ್ಟಿ ಆಳುವ ನಮ್ಮ ಪುರಂದರವಿಠಲನ ಕಟ್ಟಾಳು ಕಾಣಿರೊ