ಫಲಹಾರವನೆ ಮಾಡೊ ಪರಮಪುರುಷನೆ
ಲಲನೆ ಲಕ್ಷ್ಮೀಸಹ ಸಕಲ ಸುರರೊಡೆಯ
ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ |
ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ॥
ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು |
ಇಬ್ಬದಿಯಲಿ ಇಟ್ಟ ಶೇಷ ಫಲಂಗಳ
ನೆನೆಗಡಲಿಬೇಳೆ ಲಡ್ಡಿಗೆ ಮೂಗದಾಳು
ಪಾನಕ ಶುಂಠಿಬೆಲ್ಲ ಯಾಲಕ್ಕಿಯು ॥
ಗೊನೆ ಬಾಳೆಹಣ್ಣು ಘೃತವು ನೊರೆಹಾಲು |
ಕನಕ ಪಾತ್ರೆಯೊಳಿಟ್ಟು ಸಕಲ ಪದಾರ್ಥವ
ಧ್ಯಾನ ಪೂರ್ವಕದಿಂದ ಮಾನಸ ಪೂಜೆಯು |
ಪನ್ನೀರನೆ ಭಕುತ ವತ್ಸಲಗೆ ॥
ಜಾನಕಿರಮಣಗೆ ಷೋಡಶೋಪಚಾರ |
ದಾನವಾಂತಕ ಸಿರಿ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು