ಕೀರ್ತನೆ - 582     
 
ಮಲವು ತೊಳೆಯಬಲ್ಲುದೆ ಮನವ ತೊಳೆಯದನಕ ಹಲವು ನೀರಿನೊಳಗೆ ಪೊಕ್ಕು ಹಲುಬಿದರಿನ್ನೇನು ಫಲ? ಬೋಗಫಲವನುಂಡು ವಿಷಯಭೋಗದಿಂದ ಮತ್ತರಾಗಿ ಭೋಗ ಬೇಡಿ ಜನರು ಜೀವಕಾಗಿ ಮುನಿವರು ಯೋಗಿಯಂತೆ ಜನರ ಮೆಚ್ಚಿಗಾಗಿ ಹೋಗಿ ಉದಯದಲ್ಲಿ ಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? ಪರರ ಕೇಡಬಯಸಿ ಗುರು ಹಿರಿಯರನ್ನು ನಿಂದಿಸುತ ಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತ ಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿ ಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲ. ಮಂದಗಮನೆಯರೊಡನೆ ಆನಂದದಿಂದ ನಲಿಯುತ ತಂದೆಯ ಹೆಸರಿನಿಂದ ನೂರುಮಂದಿಗುಣಿಸಿ ಹರುಷದಿಂದ ತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ ಕಾಸುವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿ ದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲು ಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪ ವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? ಏನು ಮಾಡಲೇನು ಫಲ - ಏನು ನೋಡಲೇನು ಫಲ ಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆ ಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡು ದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ