ಕದವನಿಕ್ಕಿದಳಿದಕೊ ಗಯ್ಯಾಳಿ ಮೂಳಿ
ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |
ಒದಗಿದ ಪಾಪವು ಹೊರಗೆ ಹೋದೀತೆಂದು
ಭಾರತ ರಾಮಾಯಣ ಪಂಚರಾತ್ರಾಗಮ ।
ಸಾರತತ್ವದ ಬಿಂದು ಕಿವಿಗೆ ಬಿದ್ದಿತೆಂದು
ಹರಿಯ ಪಾದಾಂಬುಜಯುಗಳವ ನೆನೆವ ಭ-|
ಕ್ತರ ಪಾದದ ರಜ ಒಳಗೆ ಬಿದ್ದಿತೆಂದು
ಮಂಗಳಮೂರುತಿ ಪುರಂದರವಿಠಲನ |
ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ