ಸತ್ಯ ಜಗತಿದು ಪಂಚಭೇದವು, ನಿತ್ಯ ಶ್ರೀ ಗೋವಿಂದನ |
ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ
ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು ।
ಜೀವ ಜಡರೊಳು ಭೇದ ಜಡ ಜಡರೊಳು ಭೇದ
ಜಡ ಪರಮಾತ್ಮಗೆ
ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು |
ಜಾನಪಿತರಜಾನ ಕರ್ಮಜರ್ದಾನವಾರಿ ತತ್ವೇಶರು
ಗಣಪ ಮಿತ್ರರು ಸಪ್ತಋಷಿಗಳು ವಹಿ ನಾರದ ವರುಣನು |
ಇನಜಗೆ ಸಮ ಚಂದ್ರ - ಸೂರ್ಯರು ಮನುಸುತೆಯು
ಹೆಚ್ಚು ಪ್ರವಹನು
ದಕ್ಷಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು
ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು |
ಕೇವಲವು ಈ ಶೇಷ ರುದ್ರರು ದೇವಿ ಹೆಚ್ಚು ಸರಸ್ವತೀ
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು |
ವಾಯುಮುಕ್ತಗೆ ಕೋಟಿಗುಣದಿಂದಧಿಕಶಕ್ತಳು ಶ್ರೀ ರಮಾ
ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು ।
ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ವದ್ಮವಾಸಗೆ