ಕೀರ್ತನೆ - 429     
 
ವಿಧಾತೃದೇವತೆಗಳು ವಿಷ್ಣುವಿನ ಹಿಂದೆ | ಇದಕೆ ತಪ್ಪಿದರೆ ಫಣಿಫಣವ ಪಿಡಿವೆ ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ ! ಪ್ರಕಟಗ್ರಂಥಗಳೆಲ್ಲ ಭಾರತದ ಹಿಂದೆ || ಸಕಲ ವೃಕ್ಷಗಳೆಲ್ಲ ಶ್ರೀ ತುಳಸಿಯ ಹಿಂದೆ | ಸಕಲ ಪವ೵ತಗಳು ಮೇರುವಿನ ಹಿಂದೆ ಮತಗಳೆಲ್ಲವು ಮಧ್ವಮತದ ಸಾರದ ಹಿಂದೆ | ಇತರ ವರ್ಣಗಳೆಲ್ಲ ವಿಪ್ರರ ಹಿಂದೆ || ವ್ರತಗಳೆಲ್ಲವು ಹರಿಯ ದಿನದ ವ್ರತದ ಹಿಂದೆ | ಅತಿಶಯದ ದಾನಗಳು ಅನ್ನದಾನದ ಹಿಂದೆ ಉತ್ತಮಗುಣಗಳೆಲ್ಲ ಉದಾರತ್ವದ ಹಿಂದೆ | ಮತ್ತೆ ಕರ್ಮಗಳು ಮಜ್ಜನದ ಹಿಂದೆ ।। ಪೃಥ್ವಿಯೊಳಗೆ ನಮ್ಮ ಪುರಂದರವಿಠಲನ | ಭಕ್ತವತ್ಸಲನೆಂಬ ನಾಮವೇ ಮುಂದೆ