ಕೀರ್ತನೆ - 417     
 
ಪ್ರಾಚೀನಕರ್ಮವು ಬಿಡಲರಿಯದು ಯೋಚನೆಯ ಮಾಡಿ ನೀ ಬಳಲಬೇಡ ಮುನ್ನಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು ತನ್ನಿಂದ ತಾನೆ ತಿಳಿಯಲರಿಯದೆ ಇನ್ನು ದೇಹವನು ಆಶ್ರಯಿಸಿ ಫಲವೇನು ಉನ್ನತ ಹರುಷದಲಿ ಮನದಿ ಯೋಚಿಸುವ ಲೋಕಾದಿ ಲೋಕಗಳ ತಿರುಗುವ ರವಿ ರಥಕೆ ಏಕಗಾಲಿಗೆ ಏಳು ಕುದುರೆ ಕಟ್ಟಿ ಆಕಾಶ ಮಾರ್ಗದಲಿ ತಿರುಗುವ ಅರುಣನಿಗೆ ಬೇಕಾದ ಚರಣಗಳ ಕೊಡಲಿಲ್ಲ ಹರಿಯು ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ ಖ್ಯಾತಿಯನೆ ಮಾಡಿ ರಾವಣನ ಗೆದ್ದು ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ ಪ್ರೀತಿಯಿಂ ಕೌಪೀನವ ಬಿಡಿಸಲಿಲ್ಲ ಹರಿಯು ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನು ಹೊತ್ತುಕೊಂಡು ಇದ್ದ ಜಗವರಿಯಲು ಅತ್ಯಂತ ಸೇವಕನೆಂದು ಮೂಗಿನ ಡೊಂಕು ಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀಕೃಷ್ಣ ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದು ಭ್ರಾಂತನಾಗದೆ ಬಯಕೆಗಳನ್ನು ಜರಿದು ಶಾಂತಮೂರುತಿ ಸಿರಿ ಪುರಂದರವಿಠಲನ ಸಂತತದಿ ಬಿಡದೆ ಭಜಿಸೆಲವೊ ಮನುಜ