ಊರಿಗೆ ಬಂದರೆ ದಾಸಯ್ಯ - ನಮ್ಮ |
ಕೇರಿಗೆ ಬಾ ಕಂಡೆ ದಾಸಯ್ಯ
ಕೇರಿಗೆ ಬಂದರೆ ದಾಸಯ್ಯ ಗೊಲ್ಲ
ಕೇರಿಗೆ ಬಾ ಕಂಡೆ ದಾಸಯ್ಯ
ಕೊರಳೊಳು ವನಮಾಲೆ ಧರಿಸಿದನೆ ಕಿರು |
ಬೆರಳಲಿ ಗಿರಿಯನೆತ್ತಿದನೆ ||
ಇರುಳು ಹಗಲು ಇಲ್ಲದಲಿ ಹಿರಣ್ಯನ ।
ಮರಣವ ಮಾಡಿದ ದಾಸಯ್ಯ
ಮುಂಗೈ ಮುರಾರಿ ದಾಸಯ್ಯ ಚೆಲುವ |
ಪೊಂಗೊಳಲೂದುವ ದಾಸಯ್ಯ ॥
ಹಾಂಗೆ ಹೋಗದಿರು ದಾಸಯ್ಯ ಹೊ ।
ನ್ನುಂಗುರ ಕೊಡುವೆನು ದಾಸಯ್ಯ
ಕಪ್ಪು ವರ್ಣದ ದಾಸಯ್ಯ ಕಂ - |
ದರ್ಪನ ಪಿತನೆಂಬ ದಾಸಯ್ಯ ।
ಒಪ್ಪಿಕೊಂಡು ಎನ್ನ ಮನೆಗೆ ಬಂದರೆ ತೋಳ್ |
ಕುಪ್ಪಸ ಕೊಡುವೆನು ದಾಸಯ್ಯ
ಶಾಲು ಹೊದಿಸುವೆನು ದಾಸಯ್ಯ ತುತ್ತು ।
ಹಾಲು ಬೋನವುಣಿಸುವೆ ದಾಸಯ್ಯ ॥
ಕಾಲಿಗೆ ಬಿದ್ದೆನು ದಾಸಯ್ಯ ವನ |
ಮಾಲೆಯ ಕೊಡುವೆನು ದಾಸಯ್ಯ
ಸಿಟ್ಟು ಮಾಡಬೇಡ ದಾಸಯ್ಯ ತಾಳು |
ರೊಟ್ಟಿ ಸುಡುವನಕ ದಾಸಯ್ಯ ತಂ |
ಬಿಟ್ಟನಾದರು ಮೆಲ್ಲೊ ದಾಸಯ್ಯ ಪುರಂದರ |
ವಿಠಲನೆಂಬ ದಾಸಯ್ಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ