ಕೀರ್ತನೆ - 77     
 
ಏಳಿ ಮೊಸರ ಕಡೆಯಿರೇಳಿ-ಗೋ- | ಪಾಲ ಚೂಡಾಮಣಿ ಏಳದ ಮುನ್ನ ಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-| ಗಂಧ-ಕಸ್ತೂರಿ-ಕುಂಕುಮಗಳಿಟ್ಟು || ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-| ಕುಂದನ ಪಾಡುತ ಚದುರೆಯರೆಲ್ಲ ಹೊಂಗೊಡ ಬೆಳಗಿಟ್ಟು ಪೊಸಮೊಸರನೆ ತುಂಬಿ | ರಂಗನೀಲದ ಕಡೆಗೋಲನಿಟ್ಟು ॥ ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು । ರಂಗನ ಪಾಡುತ ಚದುರೆಯರೆಲ್ಲ ಬಡನಡು ಬಳುಕುತ ಕುಚಗಳಲ್ಲಾಡುತ | ಕಡಗ-ಕಂಕಣ ಝಣಝಣರೆನ್ನುತ | ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-| ಲ್ಗಡಲೊಡೆಯನ ಪಾಡುತ ಚದುರೆಯರು ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ | ಹಸಿದು ಆಕಳಿಸಿ ಬಾಯಾರುತಲಿ || ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ | ಶಶಿವದನನಿಗೆ ಬೆಣ್ಣೆಯ ನೀಡಲೋಸುಗ ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು | ಪ್ರಾಣಪದಕ ಕೃಷ್ಣನಿಗೆ ಕೊಡಲು ॥ ಚಾಣೂರ ಮಲ್ಲನ ಗೆಲಿದುಬಾರೆನುತಲಿ ॥ ಜಾಣ ಪುರಂದರವಿಠಲನಪ್ಪಲು ಗೋಪಿ