ಕೀರ್ತನೆ - 426     
 
ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ ಮಂಗಳಂ ಕರಕಲಿತ ಚಕ್ರವಿದಳಿತ ನಕ್ರನಿಗೆ ಮಂಗಳಂ ದ್ರೌಪದಿಯ ಪೊರೆದಗೆ ಮಂಗಳಂ ಧ್ರುವರಾಜಗೊಲಿದಗೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ