ಕೀರ್ತನೆ - 422     
 
ನೂರು ಕನ್ಯಾದಾನವನು ಭಾ ಗೀರಥೀ ಸ್ನಾನವನು ಮಿಗೆ ಕೈ ಯಾರ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರಗ್ರಹಾರವ ಧಾರೆಯೆರೆದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವಗೆ