ಕೀರ್ತನೆ - 409     
 
ಮಣ್ಣು ಮಣ್ಣಿನೊಳುದಿಸಲದರಲಿ ಮಣ್ಣು ಬೊಂಬೆಗಳಾಗಿ ರಂಜಿಸಿ ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ ಮಣ್ಣಿನಲಿ ಬಂಧಿಸಿದ ದೇಹವ ಮಣ್ಣುಗೂಡಿಸಬೇಡ ಜ್ಞಾನದ ಕಣ್ಣ ದೃಷ್ಟಿಯನಿಟ್ಟು ರಕ್ಷಿಸು ನಮ್ಮನನವರತ