ಕೀರ್ತನೆ - 390     
 
ಮೂರುಗುಣ ಮೊಳೆದೋರಿತದರೊಳು ಮೂರು ಮೂರ್ತಿಗಳಾಗಿ ರಂಜಿಸಿ ತೋರಿ ಸೃಷ್ಟಿ ಸ್ಥಿತಿ ಲಯಂಗಳ ರಚಿಸಿ ವಿಲಯದಲಿ ಮೂರು ರೂಪೊಂದಾಗಿ ಪ್ರಳಯದ ವಾರಿಯಲಿ ವಟಪತ್ರಶಯನದಿ ಸೇರಿದವ ನೀನೀಗ ರಕ್ಷಿಸು ನಮ್ಮನನವರತ