ಕೀರ್ತನೆ - 372     
 
ಮಾಂಸ ರಕ್ತ ಮಡುವಿನಲಿ ನವ ಮಾಸ ಜನನಿಯ ಜಠರದೊಳಗಿರು ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು ನೀ ಸಲಹಿದವನಲ್ಲವೇ ಕರು ಣಾ ಸಮುದ್ರನು ನೀನಿರಲು ಕಮ ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ