ಕೀರ್ತನೆ - 350     
 
ನರಗೆ ಸಾರಥಿಯಾಗಿ ರಣದೊಳು ತುರಗ ನೀರಡಿಸಿದರೆ ವಾರಿಯ ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈ೦ಧವನ ಶಿರವ ಕೆಡಹಿಸಿ ಅವನ ತಂದೆಯ ಕರತಳಕೆ ನೀಡಿಸಿದೆ ಹರಹರ ಪರಮ ಸಾಹಸಿ ನೀನು ರಕ್ಷಿಸು ನಮ್ಮನನವರತ