ಕೀರ್ತನೆ - 335     
 
ನಳಿನ ಲೋಚನ ನಿನ್ನ ಮೂರ್ತಿಯ ಕಳೆ ಬೆಳಗುತಿದೆ ಲಹರಿಯಲಿ ಭೂ ತಳದೊಳಚ್ಚರಿಯಾದ ನಾಮಾಮೃತ ಸಮುದ್ರದಲಿ ಬಳಸುವರು ಸತ್ಕವಿಗಳವರ ಗ್ಗಳಿಕೆಯೆನಗಿನಿತಿಲ್ಲ ಸನ್ಮತಿ ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ