ಕೀರ್ತನೆ - 334     
 
ಭಕ್ತಿಸಾರದ ಚರಿತೆಯನು ಹರಿ ಭಕ್ತರಾಲಿಸುವಂತೆ ರಚಿಸುವೆ ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ದಿಪುದು ಮುಕ್ತಿಗಿದು ನೆಲೆದೋರುವುದು ಹರಿ ಭಕ್ತರಿದನಾಲಿಪುದು ನಿಜ ಮತಿ ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ