ಕೀರ್ತನೆ - 319     
 
ಅನುಪಮಿತ ಚಾರಿತ್ರ ಕರುಣಾ ವನದಿ ಭಕ್ತ ಕುಟುಂಬಿ ಯೋಗೀ ಜನ ಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ ವನಜನಾಭ ಮುಕುಂದ ಮುರಮರ್ದನ ಜನಾರ್ದನ ತ್ರೈಜಗತ್ಪಾ ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ