ಕೀರ್ತನೆ - 315     
 
ಮಣ್ಣಲಿ ಮಾಡಿಹ ಮಡಕೆ ಮಸಿಯಾಗೆ ಮಣ್ಣಿಂದಲೆ ತಿಕ್ಕೆ ಮಸಿ ಹೋಗುವುದು ಕಣ್ಣು ಕಿವಿಗಳ ನಡೆಪ ಮನ ಮಲಿನವಾಗೆ ಕಣ್ಣು ಕಿವಿಗಳಿ೦ದಲಿ ಮನ ತಿದ್ದಲಾಗುವುದೆ? ಹಣ್ಣಾಗುವುದು ಮನ ಶ್ರೀ ಹರಿ ಧ್ಯಾನ ಮಾಡೆ ಹುಣ್ಣಾಗಿ ಕಾಡಿಪುದು ಅವನ, ಅದ ಮರೆಯೆ ಕಣ್ಣಲಿ ಕಣ್ಣಾಗಿ ಕತ್ತಲಲಿ ಬೆಳಕಾಗಿ ಫಣಿಶಾಯಿ ಆದಿಕೇಶವರಾಯ ಪೊರೆವ