ಕೀರ್ತನೆ - 314     
 
ಬೆನಕನನೊಲ್ಲೆನವ್ವ ತುಲಕಿ ಆಡುವನ ಷಣ್ಮುಖನನೊಲ್ಗೆನವ್ವ ಬಹುಬಾಯಿಯವನ ಇಂದ್ರನನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ ಚಂದ್ರನನೊಲ್ಲೆನವ್ವ ಕಳೆಗುಂದುವವನ ರವಿಯನೊಲ್ಲೆನವ್ವ ಉರಿದು ಮೂಡುವನ ಹರನನೊಲ್ಲೆನವ್ವ ಮರುಳುಗೊಂಬುವನ ಚೆನ್ನರಾಯ ಚೆಲುವ ಜಗಕೆಲ್ಲ ಒಡೆಯನ ಕರೆದು ತಾರೆ ಎನಗೆ ಕಾಗಿನೆಲೆಯಾದಿಕೇಶವನ