ಸಿ೦ಗರದ ಸಿರಿಧರನೆ ತಿಕ೦ಠಸನ್ನುತನೆ
ಗ೦ಗೆಯನು ಉಂಗುಟದಿ ಪೆತ್ತ ಮೂರುತಿಯೆ - ಕಲುಬಗಿರಿ ರಂಗನೊಲಿದುಪ್ಪವಡಿಸಯ್ಯ ಹರಿಯೆ
ಕುಸುಮ ಸೌರಭವ ಎಡೆವೆರಸಿ ಮಾರುತ ತೀಡೆ
ಎಸೆವ ರೋಪಣಸಿ ಪೆಸರ್ವಕ್ಕಿ ಝೇಂಕಾರ ಮಾಡೆ
ಪೊಸ ಶಾಸ್ತ್ರ ಕ್ರಮ ಕೂಗೆ ಜಾರ ತಸ್ಕರ ತತಿಯು
ಬಸವಳಿದು ಭಯದಿ ಪೋಗೆ
ಶಶಿತಾರೆಗಳು ಸರಿಯೆ ನೀಲಾಬ್ಜ ಮೈ ಮರೆಯೆ
ಬಿಸಿಗದಿರ ಪೂರ್ವಾಚಲವನಡರಿ ಬಂದ ಪೀತ
ವಸನ ನೀನೊಲಿದುಪುವಡಿಸಯ್ಯ ಹರಿಯೆ
ಭಕುತರೊಳು ಫಂಟಾಕರ್ಣನು ಜಯ ಸುವರ್ಣಕ ಪುತ್ರ
ಮುಕುತಿ ದೇಹಿಕ ಸಿಲೀಮುಖನಯ್ಯ ಧ್ರುವ ದೇವ
ಅಖಿಳ ಸುವ್ರತ ಕ್ಷೋಣಿಯಿಂದಲಿ ಹಿರಿಯ
ಪ್ರಕೃತಿರಹಿತಾ೦ಬರೀಷ
ವಿಕಟ ವಧುವಿನ ಮಾಯೆ ಗೆಲಿದ ರುಕುಮಾಂಗದನು
ಸುಕೃತಿವ೦ತನು ಯಮನ ತನಯ ಭೀಮಾರ್ಜುನರು
ನಕುಲ ಸಹದೇವಕರು ಬಂದರೇಳೈ ಭೃತ್ಯ
ನಿಕರಕೊಲಿದು ಉಪ್ಪವಡಿಸಯ್ಯ ಹರಿಯೆ
ಗ೦ಡುವೆಣ್ಣಿನ ರೂಪವೆತ್ತು ರಾಜಿಸುವವನು
ಮಂಡೆಯಲಿ ಕೊಂಡಾಂತು ಮೈ ಜುಮ್ಮುತಾಳಲು-
ದಧ್ದಂಡಧಾರನು ತನ್ನ ತೆರೆದೋರಿ...
ತುಂಡ ವಿಕ್ರಮ ವರುಣನು
ತುಂಡದೊಳು ಚ೦ಡವುಳ್ಳವನ ಬಲವನು ಮುರಿದೆ
ಡಿಂಡೀರ ಸರ್ವಕೃತ್ ಆನೆ ವಾಹನ.
ಅ೦ಡಲೆದು ಓಡುವ ವ್ಯಾಫ್ರಾನುಚರ್ಮ ಕಂದ ರಮೆಯ
ಗ೦ಡನೊಲಿದುಪ್ಪವಡಿಸಯ್ಯ ಹರಿಯೆ
ವಾಲ್ಮೀಕಿ ದುರ್ವಾಸ ವಿದುರ ಪಟಿಪರಿ ಪೂರ್ವ
ಜಲಜಾಪ್ತ ವರಗಾಲವಾನ್ವಿತ ಅತ್ರಿ ಶಾಂಡಿಲ್ಯ
ಚಲದಂಕ ಕೌಶಿಕನು ಕಪಿಲ ಮಾರ್ಕಂಡೇಯ
ತಳಕಾಲ ನಯನದವನು
ಜಲಧಿಯನು ಪೀರ್ದ ಮಹಾಬಲದ ಬಲವಂತನು
ಸುಲಭ ವಶಿಷ್ಠನು ಪರಾಶರನು ಶುಕಮುನಿಯು
ಕಲಕ೦ಠ ಹೊಳೆಯ ನಿಟ್ಟಿಸಿದವನು ಬಂದನೆಲೆ
ಜಲಜಾಕ್ಷನೊಲಿದುಪ್ಪವಡಿಸಯ್ಯ ಹರಿಯೆ
ವೇದ ತಸ್ಮರನೊಡನೆ ಕಾದಿ ವೇದವ ಸೆಳೆದು
ಭೂಧರವ ನೆಗಹಿ ತಾಮಸನ ಜೀವವನಳಿದು
ವಾದಿಸುವ ಹಿರಣ್ಯಕನ ಕರುಳ ನಖದಲಿ ಬಗೆದು
ಪಾದದಲಿ ಧರೆಯನಳೆದು
ಯೋಧಾರ್ಜುನನ ಅರೆದು, ಸ್ವಾದು ಅನ್ನವ ತೊರೆದು
ಕ್ರೋಧಿಯಸುವೀ೦ಟಿ ತ್ರಿಪುರವ ಮುರಿದು ಹಯವೇರು
ಏದರಾಲಸ್ಯಮೇಳೇಳು ಮಾಧವನೆ ಕಲುಬ
ಗಿರಿಯಲ್ಲಿ ಬಳಲಿ ಪವಡಿಸಿದೆ
ಸಾಧು ನರಸಿಂಹ ಕಾಗಿನೆಲೆ ಆದಿಕೇಶವನ ಮುಂದ-
ಗಾಧ ಕಾರ್ಯಗಳಿವೆ ಭೂಧರನೊಲಿದುಪ್ಪವಡಿಸಯ್ಯ ಹರಿಯೆ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಉದಯ ರಾಗಗಳು