ಕೀರ್ತನೆ - 307     
 
ತಂಗದಿರನನಿಮಿಷ ತಾರಕೆಗಳು ನುಸುಳಿಸೆ ಪ- ತಂಗ ಪರ್ವತವನಡರಿ ಬಂದನು ಜ೦ಗಮಗಳೆದ್ದು ಜಯಜಯವೆನುತಿರೆ ನರ ಸಿಂಗನೊಲಿದುಪುವಡಿಸೊ ಹರಿಯೆ ಮೂಡುಗಡೆ ಮುಗಿಲು ಕೆಂಪಾದುದಡವಿಯ ತಾಮ್ರ ಚೂಡ ಕಾಳೋದರವು ಕೋಗಿಲೆಗಳುಲಿಯುತಿರೆ ನಾಡ ನಾನಾ ತಪೋಧನರು ತತ್ಕಾಲದಲಿ ಬೀಡ ಹೊರಹೊಂಟು ನಡೆದುದು ಕ್ರೋಡದಂಷ್ಟ್ರಜೆ ಕೃಷ್ಣವೇಣಿಯು ವರುಣೆ ಕೂಡಿ ಗಂಗಾಸ್ನಾನಗಳ ಮಾಡಲುದ್ಯೋಗಿಸಿದರಖಿಳ ಸಾಧುಗಳು ಅರಿವಿಭಾಡನೊಲಿದುಪ್ಪವಡಿಸೊ ಹರಿಯೆ ಕುಗ್ಗಿದುವು ಕುಮುದ ಕುಂದ ಚಕೋರಾದಿಗಳು ಭುಜ ಹಿಗ್ಗಿದುವು ಚಕ್ರವಾಕಾಕಾಶದಲಿ ನೆರೆದು ಮೊಗ್ಗಿದುವು ಮಧುಪ ಸಂಕುಲ ಪುಷ್ಪವಾಟಿಯೊಳು ಜಗ್ಗಿದುವು ಜಡಿವ ತೆರದಿ ವರಕವಿಗಳೆದೆಯ ಮಧುರೋಕ್ತಿ ಎನಿಸಿ ನೆಗ್ಗಿದುವು ನಿಜ ಕುಲಾದ್ರಿಗಳಲಿ ಭಾನುವಿನ ಕಿರಣ ' ನುಗ್ಗಿ ಫೃಥ್ವಿಯೊಳು ಪಸರಿಸಿತು ಅನರ್ಘ್ಯನೊಲಿದುಪ್ಪವಡಿಸಯ್ಯ ಹರಿಯೆ ಅ೦ಜನಾಸೂನು ಫಣಿಪತಿ ಗರುಡ ಪ್ರಹ್ಲಾದ ಕುಂಜರಾಧಿಪ ಬಲಿ ವಿಭೀಷಣ ಧ್ರುವ ರಂಜಕದ ಮೋಹಿನಿಯ ಗೆಲಿದ ರುಕುಮಾಂಗದನು ಧ- ನಂಜಯನಾತ್ಮಸಂಭವನ ಸಂಜಾತ ವಿದುರನಕ್ರೂರ ಮುಂಜಾವದಲಿ ಮುಮುಕ್ಷುಗಳು ಬಂದರು ದಯಾ ಪ೦ಜರವೊಲಿದುಪ್ಪವಡಿಸೊ ಹರಿಯೆ ಶ್ವೇತಗಜ ಮಹಿಷ ಮಾನವ ನೆಗಳು ಏಣು ಸ೦- ಜಾತಶ್ಚ ವೃಷಭ ಮೇಷ ವಾಹನರು ಭೂತಳದೊಳಿದ್ದ ಮನುಮುನಿ ನಿರ್ಜರವ್ರಾತ ವಾಣೀಶನೊಡನೆ ಆತ ತನ್ನಮಳ ಹಯವನೇರಿಕೊಂಡು ಪ್ರ- ಖ್ಯಾತ ದುಂದುಭಿಯ ರಭಸದೊಡನೆ ಚೇತ ನಾತುಮಕನೆ ನಿನ್ನಯ ಬಳಿಗೆ ಬಂದರು ವಿಶ್ವ ನಾಥನೊಲಿದುಪ್ಪವಡಿಸಯ್ಯ ಹರಿಯೆ ತಾಳದಂಡಿಗೆ ಪಿಡಿದು ತುಂಬುರು ನಾರದರು ಭೂ ಪಾಳಿ ದೇಶಾಕ್ಷಿ ನಾರಾಯಣಿ ಗುಜ್ಜರಿ ಮಾಳವಿ ಶ್ರೀದೇವಿ ಗಾಂಧಾರಿ ಮಲಹರಿ ಸಾಳಗವು ಸೌರಾಷ್ಟ - ಗುಂಡಕ್ರಿಯಾ ಲಲಿತ ಸುಳಾದಿಯಲಿ ನಾಮ ಕೀರ್ತನೆಗಳ ಪಾಡಿ ಮೇಳೈಸಿ ವಾದ್ಯ ನೃತ್ಯಗಳಾಡುತಿಹರು ಪಶು ಪಾಲನುಪ್ಪವಡಿಸೊ ಹರಿಯೆ ಮೂಜಗದ ವ್ಯವಹಾರಿ ಮುಂಕೊಂಡು ಭರ ದ್ವಾಜ ರೋಮಷ ಅತ್ರಿ ಗಾರ್ಗೇಯ ಜ- ಯ ಜಯಾಸನ ಶುಕ ಪರಾಶರ ರಿಪುಮಾನ್ಯ ಪ- ಯೋಜಸಂಭವ ಸಂತತಿ ಭೋಜವರ ಭ್ರ ಗು ಕಪಿಲ ಮಾರಹರ ಗೌತ- ಮಜಾನುಜ ಖಷಿ ಕೌಶಿಕ ವಶಿಷ್ಟ ಬೀಜಾಕ್ಷರದ ಕೀರ್ತನಗೈದು ಇನಕೋಟಿ ತೇಜನೊಲಿದುಪ್ಪವಡಿಸಯ್ಯ ಹರಿಯೆ ವಾಗೀಶ ಬೃಹಸ್ಪತಿ ಹಜಾರದೊಳು ತಲೆ ದೂಗಿ ಶ್ರುತಿಶಾಸ್ತ್ರದಲಿ ಸ್ತುತಿಸಿಹರು ನಾಗಿಣಿಯರಮರಲೋಕದ ನರ್ತಕಿಯರು ಬಾಗಿಲೊಳು ಮಂಗಳೋದಕವಿಡಿದು ಕೆಲವರನು ರಾಗಿಸುತ ರತ್ನದಾರತಿಯ ತಾಳ್ದರು ಕಾಗಿನೆಲೆಯಾದಿಕೇಶವರಾಯನಮರ ಸಂಯೋಗಿ ಒಲಿದುಪ್ಪವಡಿಸಯ್ಯ ಹರಿಯೆ