ಕೀರ್ತನೆ - 304     
 
ಏಳಯ್ಯ ಪಾರ್ವತಿ ರಮಣ ಪಾವನ ಚರಣ ಏಳಯ್ಯ ಫಣಿಕುಲಾಭರಣ ಪಾವಕ ನಯನ ಏಳಯ್ಯ ಬೆಳಗಾಯಿತು ಕಮಲ ಸಂಭವ ಮುಖ್ಯ ವಿಮಲ ವಿಶ್ವಾಮಿತ್ರ ಜಮದಗ್ನಿ ಕಶ್ಯಪ ವಶಿಷ್ಟ ಕಣ್ವಾದಿಗಳು ಸುಮನ ತತಿ ಬಂದು ಕಾದಿಹರು ಬಾಗಿಲೊಳೀಗ ಉಮೆಯರಸ ಒಲಿದುಪ್ಪವಡಿಸಯ್ಯ ಹರನೆ ಇಂದ್ರ ದಿಕ್ಪಾಲಕರು ಕೂಡಿ ಒಂದೆಶೆಯೊಳಗೆ ವಂದಿಸುತ ನಾರದನು ಒಲಿದು ಗಾನವ ಪಾಡಿ ನಂದಿ ಭೃಂಗೀಶರು ನಾಟ್ಯವಾಡುತಲಿಹರು ಚಂದ್ರಧರ ಒಲಿದುಪ್ಪವಡಿಸಯ್ಯ ಹರಿಯೆ ಗರುಡ ಗಂಧರ್ವ ಯಕ್ಷ ಕಿನ್ನರ ಕಿಂಪುರುಷ ಪರಮ ಪುರುಷರು ನಿನ್ನ ಪಾದವೇ ಗತಿಯೆಂದು ನಿರುತದಿ೦ ಬಂದು ಓಲೈಸುತಿಹರು ತ್ರಿಪುರ ಹರನೆ ಪಂಪಾಪತಿಯೆ ಏಳಯ್ಯ ಬೆಳಗಾಯಿತು