ಕೀರ್ತನೆ - 303     
 
ಹೆಣ್ಣಗಳೊಳು ಹೆಮ್ಮಕಾರಿಕೆ ಸತ್ಯ ಕಣ್ಣುಕಟ್ಟಲ್ಲ ಕವಿಗಳ ಕವಡಲ್ಲ ರತಿಗೆ ಶೃ೦ಗರವೇನು ಶೃಂಗರದಲಿ ರತಿಯೇನು ರತಿಯಲ್ಲಿ ಮೊದಲೇನು ಮೊದಲಿಗೆ ತುದಿಯೇನು ಜತೆಗೆ ಮತ್ತರವೇನು ಮತ್ಸರದಲಿ ಕಥೆಯೇನು ಕತೆಯಲ್ಲಿ ಕಾಂಬುದೇನು ಕಂಡರೆ ಫಲವೇನು ಮನಕೆ ಮುಮ್ಮರೆಯೇನು ಮುಮ್ಮರೆಗೆ ನೆನಹೇನು ನೆನೆದರೆ ನಂಬಿಗೆಯೇನು ನಂಬಿದರೆ ಅಳವೇನು ಅಳವಿಗೆ ಕಳವಳವೇನು ಕಳವಳದಲಿ ಕನಸೇನು ಕನಸಿನಲಿ ಕಾಂಬುದೇನು ಕಂಡರೆ ಭಯವೇನು ಮೊ.ಕೆ ಮೊದಲೇನು ಮೊದಲಿಗೆ ನಿಲುಗಡೆಯೇನು ನಿಲುಗಡೆಗೆ ಸವಿಯೇನು ಸವಿಯಲ್ಲಿ ಸುಖವೇನು ಅಲರಂಬಿಗೆ ನಲಿವೇನು ನಲಿವಿಗೆ ಗೋಪ್ಯವೇನು ಸಲೆ ಆದಿಕೇಶವ ನಿನಗೆ ಸೋಲೆಂದರೇನು