ಕೀರ್ತನೆ - 302     
 
ಹಲವು ಜೀವನವ ಒಂದೆಲೆ ನುಂಗಿತು - ಕಾಗಿ ನೆಲೆಯಾದಿ ಕೇಶವನು ಬಲ್ಲನೀ ಬೆಡಗ ಹರಿಯ ನುಂಗಿತು ಪರ ಬ್ರಹ್ಮನ ನುಂಗಿತು ಸುರರಿಗುಂಟಾದ ದೇವರ ನುಂಗಿತು ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ ಹರಿಯ ಬಳಗವ ಒಂದೆಲೆ ನುಂಗಿತು ಎ೦ಟು ಗಜವನು ನುಂಗಿ ಕಂಟಕರಯಿವರ ನುಂಗಿ ಉಂಟಾದ ಗಿರಿಯ ತಲೆಯ ನುಂಗಿತು ಕ೦ಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ ಎ೦ಟಾರು ಲೋಕ ಒಂದೆಲೆ ನುಂಗಿತು ಗಿಡವ ನುಂಗಿತು ಗಿಡದೊಡತೊಟ್ಟನು ನುಂಗಿತು ಗಿಡುವಿನ ತಾಯ ತಂದೆಯ ನುಂಗಿತು ಬೆಡಗ ಬಲ್ಲರೆ ಪೇಳಿ ದೇವ ಕನಕದಾಸ ಎ- ನ್ನೊಡೆಯಾದಿಕೇಶವ ಬಲ್ಲನೀ ಬೆಡಗ