ಕೀರ್ತನೆ - 301     
 
ಸಹಜವಿದು ಈ ನುಡಿಯು ಸಟೆಯ ಮಾತಲ್ಲ ಮಹಿಯೊಳಗೆ ಪೇಳುವೆನು ವಿಹಿತ ವಾಕ್ಕಗಳ ಅ ಶ್ರುತಿ ಶಾಸ್ತ್ರ ಪುರಾಣಗಳ ಓದುವನೆ ಶೂದ್ರ ಅತಿಥಿಗಾದರಿಸುವನೆ ಅತಿಲುಬ್ಧನು ಪ್ರತಿನಿತ್ಯ ಸಂಧ್ಯಾನ ಮಾಡುವವನೇ ಪಾಪಿ ಪತಿಯಾಜ್ಞೆಯಿಂದಿಹಳೆ ಪರಮ ಪಾತಕಿಯು ದಾನಧರ್ಮಗಳನು ಬಿಡುವನೇ ಧರ್ಮಾತ್ಮ ಮಾನಾಭಿಮಾನವನು ಹಿಡಿವವನೆ ಯೋಗಿ ಪ್ರಾಣಿಗಳ ಹಿ೦ಸೆಯನು ಮಾಡುವನೆ ಸುಜ್ಞಾನಿ ದೀನ ಸಜ್ಜನರನ್ನು ಕೆಡಿಸುವನೆ ಸತ್ಪುರುಷ ಕೆರೆಕಟ್ಟಿ ಪೂದೋಟಗಳ ರಚಿಸುವನೆ ದ್ರೋಹಿ ಗುರು ದೈವ ಹಿರಿಯರನು ಬೈಯುವನೆ ನಿಷ್ಠ ಸಿರಿಕಾಗಿನೆಲೆಯಾದಿಕೇಶವನ ಚರಣವನು ನಿರುತದಲಿ ಸ್ಮರಿಸುವನೆ ಅವಿಚಾರ ಪುರುಷ