ಸದರವಲ್ಲವೊ ನಿಜಯೋಗ - ಸಚ್ಚಿದಾನಂದ
ಸದಮಲ ಗುರುದಿಗಂಬರನ ಸಂಯೋಗ
ಅಡಿಯನಂಬರ ಮಾಡದನಕ - ಅಗ್ನಿ
ಕಿಡಿಯೆದ್ದು ಮೇಲಣ ಕೊಡನುಕ್ಕದನಕ
ಒಬಡಲೆರಡೊಂದಾಗದನಕ ... ಅಲ್ಲಿ
ಒಡಗೂಡಿ ಅಂಗನೆ ನುಡಿಗೇಳದನಕ
ನಾಡಿ ಹಲವು ಕಟ್ಟದನಕ - ಬ್ರಹ್ಮ
ನಾಡಿಯೊಳು ಪೊಕ್ಕು ಮುಳುಗಾಡದನಕ
ಕಾಡುವ ಕಪಿ ಸಾಯದನಕ - ಸತ್ತ
ಓಡಿನೊಳಗೆ ರಸ ತೊಟ್ಟಿಕ್ಕದನಕ
ಆದಿಕುಂಭ ಕಾಣದನಕ - ಅಲ್ಲಿ
ಸಾಧಿಸಿ ಭೇದಿಸಿ ಸವಿಯುಣ್ಣದನಕ
ಭೇದವು ಲಯವಾಗದನಕ - ಬಡ
ದಾದಿಕೇಶವ ನಿಮ್ಮ ನೆಲೆಗಾಣದನಕ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು