ಕೀರ್ತನೆ - 299     
 
ಲಟಪಟ ನಾ ಸಟೆಯಾಡುವೆನಲ್ಲ ವಿಠಲನ ನಾಮ ಮರೆತು ಪೋದೆನಲ್ಲ ಶೇಷಗಿರಿಯ ಮೇಲೆ ಸವುತೆಯ ಬಿತ್ತಿ ದೇವಗಿರಿಯ ಮೇಲೆ ಅವತಾರವಿಕ್ಕಿ ಹಾಳೂರಿನೊಳಗೊಬ್ಬ ಕುಂಬಾರ ಸತ್ತ ಗೋಕರ್ಣದೊಳಗೊಬ್ಬ ಪರದೇಶಿ ಅತ್ತ ಆ ಸಮಯದಿ ಮೂರು ರಾಯರ ಕಂಡೆ ಕುಪ್ಪುಸ ತೊಟ್ಟ ಕೋಳಿಯ ಕಂಡೆ ಬೆಳ್ಳಕ್ಕಿ ಬೆರಣಿಯ ಮಾಳ್ವುದ ಕಂಡೆ ನರೆಸೂಳೆ ಗೆಯ್ದುದ ಕಣ್ಣಾರೆ ಕಂಡೆ ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ ಆಡೊಂದು ಮದ್ದಳೆ ಬಡಿವುದ ಕಂಡೆ ಕಪ್ಪೆ ತತ್ಥೈ ಎ೦ದು ಕುಣಿವುದ ಕಂಡೆ ಬಾಡದಾದಿಕೇಶವನ ಕಣ್ಣಾರೆ ಕಂಡೆ