ಮೂವರೇರಿದ ಬಂಡಿ ಹೊರೆನೆನದು
ದೇವಕೀ ನಂದನನು ತಾನೊಬ್ಬ ಬಲ್ಲ
ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬ
ಓಡಾಡಿದನೊಬ್ಬ ಈ ಮೂವರು
ಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿ
ಓಡಾಡಿದವನೊಬ್ಬ ಓಡನಯ್ಯ
ಮಾಯಾಕಾರನು ಒಬ್ಬ ಕಾಯ ಬಡಲಿಗನೊಬ್ಬ
ಕಾಯ ಗಿರಿಪೊತ್ತನೊಬ್ಬ ಈ ಮೂವರು
ಮಾಯಾಕಾರಗೆ ರೂಪ ಕಾಯ ಬಡಲಿಗ ಚೆಲ್ವ
ಕಾಯ ಗಿರಿ ಪೊತ್ತವನು ಕಡುಧರ್ಮಿಯು
ಹರಿಗೆ ಮಾವನು ಆದ ಹರಿಗಳಿಯ ತಾನಾದ
ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ
ಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದ
ಸಿರಿಧರನು ಕಾಗಿನೆಲೆಯಾದಿಕೇಶವರಾಯ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು