ಕೀರ್ತನೆ - 294     
 
ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿ ರಾಜನಿಗೆ ಒಂದು ಪಾಲು ರಾಜ್ಯಕ್ಕೆ ಎರಡು ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮೂವತ್ತೆರಡು ಕುಂಜರದ ಗಮನೆ ಕೋವಿದನ ಅರಸಿ ಐದು ಮಾತಿನ ಮೇಲೆ ವೈದಿಕರೆಂಬುವರು ಐದು ದೀವಿಗೆ ಗಾಳಿ ಬೀಸಲೆಂದು ಬೂದಿ ಹಾರಿದ ಮಣ್ಣ ಮೇಲೆ ಮುದ್ದೆಯ ಕಲಸಿ ಆದ ಲೋಲರು ಪೇಳಿ ಈ ಸೊಬಗುಬೆಡಗ ಎರಡು ನಂದಿಯ ಹೂಡಿ ಗರುಡ ಹೊಲವನು ಉತ್ತು ಹರಗಿ ಮುಚ್ಚಿದ ಕೋಲನರಿದೆನೆಂದು ಹರಿಯ ದಾಸರ ಕನಕ ಹಾಕಿದೀ ಮು೦ಡಿಗೆಯ ಸಿರಿಯಾದಿಕೇಶವನಾಣೆ ಬಲ್ಲವರು ಪೇಳಿ