ಬಲ್ಲವರು ಪೇಳಿರೈ ಬಹು ವಿಧದ ಚತುರತೆಯ
ಎಲ್ಲರಿಗು ಸಮ್ಮತವು ಏಕಾ೦ತವಲ್ಲ
ಕಂಕಣಕೆ ಮೊದಲೇನು ಕಾರ್ಮುಗಿಲ ಕಡೆಯೇನು
ಶ೦ಕರನ ಮೊಮ್ಮಗನ ಮುಖದ ಸಿರಿಯೇನು
ಪಂಕಜಕೆ ಕುರುಹೇನು ಪಾರ್ಥಿಯಳ ತಪವೇನು
ಅಂಕಿತಕೆ ಗುರುತೇನು ಅಜನ ಗುಣವೇನು ?
ಕಲಿಗಳಿಗೆ ಕಣ್ಣೇನು ಕಾವನಿರುಹುಗಳೇನು
ಲಲನೆಯರ ಒಲಿಸುವ... ಇದೇನು
ನೆಲಗಳಿಗೆ ಸಾಕ್ಷಿಯೇನು ನ್ಯಾಯದಾ ಪರಿಯೇನು
ಬಲವ ನಿಲಿಸುವುದೇನು ಭಾಗ್ಯವು ಇದುಯೇನು ?
ಸತ್ಯ ಕುರುಹೇನು ಪೃಥ್ವಿಗೆ ಕಡೆಯೇನು
ಚಿತ್ತವನು ಸೆಳೆದೊಯ್ವ ಕಪಟವು ಇದೇನು
ಮರ್ತ್ಯದೊಳು ಕಾಗಿನೆಲೆಯಾದಿಕೇಶವನಂಘ್ರಿ
ಅರ್ತಿಯಿಂದಲಿ ಕೂಡಿದುದಕೆ ಫಲವೇನು ?
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಅನುಭಾವದ ನಿಗೂಢ ಮುಂಡಿಗೆಗಳು