ಕೀರ್ತನೆ - 291     
 
ಬಲ್ಲವರು ಪೇಳಿರಿ ಲೋಕದ ಈ ಪದನು ಪುಲ್ಪಶರನನು ರಂಗ ಪೆತ್ತ ಮಹಿಮೆಯನು ಗರಿಯು೦ಟು ನೋಡಿದರೆ ಪಕ್ಷಿಕುಲ ತಾನಲ್ಲ ಧರೆಯ ಬೆನ್ನಲಿ ಶಿರವ ಮಡಗಿಕೊಂಡಿಹುದು ಬರಿಗಾಲ ಭಾರದಲಿ ನಡೆಯಲೊಲ್ಲದು ಮುಂದೆ ಎರಡು ಮೈ ಒಂದಾಗಿ ಕೂಡಿಕೊಂಡಿಹುದು ಇಳೆಯಲ್ಲಿ ಒಂದು ಪದ ಗಗನದಲಿ ಒಂದು ಪದ ಕುಲ ವೈರಿಗಳ ಕೊಂದು ನಲಿದಾಡುತಿಹುದು ಹೊಲದೊಳಗೆ ಜೋಡಗಲಿ ತಿರುಗಾಡುತಿಹುದು ಅದು ಕಳದೊಳಗೆ ಕ೦ಬುಗಳ ಹರಡಿಕೊಂಡಿಹುದು ಜನಿಸಿದಾ ಬಳಿಯಲ್ಲಿ ತಾ ಲಜ್ಜೆದೊರೆದಿಹುದು ಕುಣಿದಾಡುತಿದೆ ಹರಿಯ ತಲೆ ತುರಗವೇರಿ ಕನಕನೊಡೆಯನು ಕಾಗಿನೆಲೆಯಾದಿಕೇಶವನು ಜನಕೆ ನಿತ್ಯವು ಪ್ರಸಾದವನು ಕೊಡುತಿಹನು