ಕೀರ್ತನೆ - 290     
 
ಬಯಲ ಬಾವಿ ನೀರಿಗ್ಹೊಂಟಾಳೊಬ್ಬ ಬಾಲಿ ಹರಿಯೋ ಹೊಳಿ ನೀರಿಗ್ಹೊಂಟಾಳೊಬ್ಬ ಬಾಲಿ ಕಾಲಿಟ್ಟು ಮೊಗಿಬ್ಯಾಡ ಕೈಯಿಟ್ಟು ಹೊರಬ್ಯಾಡ ನೀರಿಲ್ಲದೆ ಮನಿಗಿ ಬರಬ್ಯಾಡ ಸತ್ತದ್ದು ತರಬೇಡ ಜೀವದ್ದು ಕೊಲಬ್ಯಾಡ ಬಾಡಿಲ್ಲದೆ ಮನಿಗಿ ಬರಬ್ಯಾಡ ಕಾಗಿನೆಲಿ ಕನಕದಾಸ ಹಾಕಿದ ಮುಂಡಿಗಿ ಬಲ್ಲಂಥ ಒಡೆಯರು ಒಡೆದು ಹೇಳಿರಣ್ಣ